ಮಹಾಲಕ್ಷ್ಮಿ ಲೇಔಟ್ ನ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ.
ಅಶ್ವಿನಿ ಪ್ರೊಡಕ್ಷನ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಭಕ್ತಿ ಪ್ರಧಾನ ಚಿತ್ರ *"ಮಣಿಕಂಠ"* ಚಿತ್ರದ ಮೊದಲ ಹಾಡಿನ ಪೂಜಾ ಸಮಾರಂಭ ಇಂದು ವಿಜೃಂಭಣೆಯಿಂದ ನಡೆಯಿತು.
ಈ ಚಿತ್ರದ ಮೊದಲ ಹಾಡು *"ಸ್ವಾಮಿ ಅಯ್ಯಪ್ಪ"* ಹಾಡನ್ನು ಖ್ಯಾತ ಗಾಯಕರಾದ *ಅಜಯ್ ವಾರಿಯರ್* ಅವರು ಹಾಡಿದ್ದಾರೆ.
ಈ ಪವಿತ್ರ ಹಾಡು ಇಂದು ದಿನಾಂಕ *28/08/2026, ಬೆಳಿಗ್ಗೆ 11:11 ಕ್ಕೆ* ಕರ್ನಾಟಕದ ನಂಬರ್ 1 ಮ್ಯೂಸಿಕ್ ಲೇಬಲ್ *"ಆನಂದ್ ಆಡಿಯೋ ಮೈನ್ ಚಾನಲ್"* ನಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ.
*ಈ ಪೂಜಾ ಸಮಾರಂಭದಲ್ಲಿ ಉಪಸ್ಥಿತರಿದ್ದವರು:*
ಈ ಚಿತ್ರದ ನಿರ್ದೇಶಕರು ಹಾಗೂ ನಾಯಕ ನಟರಾದ ಶ್ರೀ *ಸಂತೋಷ್ ಸಿಂಹ* ರವರು, ನಿರ್ಮಾಪಕರಾದ ಶ್ರೀಮತಿ *ಅಶ್ವಿನಿ* ರವರು, ಮ್ಯೂಸಿಕ್ ಡೈರೆಕ್ಟರ್ *ಸ್ವರೂಪ್*, ಗಾಯಕ *ಅಜಯ್ ವಾರಿಯರ್*, ಬಾಲನಟ *ಗುರು ಜೀವನ್*, ಡಿ.ಒ.ಪಿ *ವರ್ಷಿತ್*, *ಚೇತನ್ ಕುಮಾರ್ ಎನ್*, *ತಿಲಕ್ ಆರ್*, *ದೇವರಾಜ್ ಕೇಸರಿ* ಮತ್ತು ಅಯ್ಯಪ್ಪ ಸನ್ನಿಧಿಯ *ಗುರುಸ್ವಾಮಿಗಳು* ಹಾಗೂ ನೂರಾರು ಅಯ್ಯಪ್ಪ ಭಕ್ತರು ಭಾಗವಹಿಸಿದ್ದರು.
ಮಣಿಕಂಠ ಚಿತ್ರತಂಡಕ್ಕೆ ಆನಂದ್ ಆಡಿಯೋ ತಂಡದ ವತಿಯಿಂದ ಹಾಗೂ ಎಲ್ಲಾ ಅಯ್ಯಪ್ಪ ಭಕ್ತರ ವತಿಯಿಂದ ಶುಭಾಶಯಗಳು.
*ಸ್ವಾಮಿಯೇ ಶರಣಂ ಅಯ್ಯಪ್ಪ.*



