ಕೋಲಾರ ಸುದ್ದಿ.
ದಿನಾಂಕ:-19.09.2026
ಶ್ರೀನಿವಾಸಪುರದ ಬಿ.ಎಂ.ಎಸ್ ಕಚೇರಿಯಲ್ಲಿ ಅದ್ದೂರಿಯಾಗಿ ವಿಶ್ವಕರ್ಮ ಜಯಂತಿ ಅಚರಣೆ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಭಾರತೀಯ ಮಜ್ದೂರ್ ಸಂಘದ ಕಚೇರಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು. ವಿಶ್ವಕರ್ಮ ಜಯಂತಿ’ ಆಚರಣೆ ಸಮಾರಂಭದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಭಾರತೀಯ ಮಜ್ದೂರ್ ಸಂಘದ ಕೋಲಾರ ಜಿಲ್ಲಾದ್ಯಕ್ಷರಾದ ಶಿವಕುಮಾರ್ ರವರು
ವಿಶ್ವಕರ್ಮರು ದೇವಶಿಲ್ಪಿ ಎಂದೇ ಪ್ರಸಿದ್ಧರು. ನಿರ್ಮಾಣ ಕೌಶಲ್ಯ, ವಾಸ್ತುಶಿಲ್ಪ, ಶಿಲ್ಪಕಲೆ, ಆಭರಣ ಕಲೆ, ಕಮಾರಿಕೆ ಇವೆಲ್ಲವನ್ನೂ ವಿಶ್ವಕರ್ಮರು ಪ್ರತಿನಿಧಿಸುತ್ತಾರೆ.
ಪುರಾಣ ಕಾಲದಲ್ಲಿ ಇಂದ್ರನ ಅಮರಾವತಿ, ಲಂಕೆಯ ರಾವಣನ ಅರಮನೆ ಮತ್ತು ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ವಿಶ್ವಕರ್ಮರೇ. ಅನಾದಿ ಕಾಲದಿಂದಲೂ ಎಂಜಿನಿಯರಿಂಗ್ ಕೌಶಲ್ಯಕ್ಕೆ ಪ್ರಸಿದ್ಧರಾಗಿರುವ ವಿಶ್ವಕರ್ಮರು ಕಮಾರಿಕೆ, ಶಿಲ್ಪಕಲೆ, ಅಕ್ಕಸಾಲಿಗಕಲೆ, ಮರಗೆಲಸ ಇತ್ಯಾದಿ ಕಸಬುಗಳ ಮೂಲಕ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ನಾಗಭೂಷಣ್ ರವರು
ವಿಶ್ವಕರ್ಮ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 17, 2026 ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ ಆದರೆ ನಾವು ಕಾರಣಾಂತರಗಳಿಂದ ಇಂದು ಅಚರಿಸುತ್ತಿದ್ದು ಕಟ್ಟಡ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ತಾಂತ್ರಿಕ ವಲಯದ ಜನರಿಗೆ ಈ ಹಬ್ಬವು ಅತ್ಯಂತ ಪ್ರಮುಖವಾಗಿದೆ.
ಇಂದಿನ ಕಟ್ಟಡ ನಿರ್ಮಾಣದಿಂದ ಹಿಡಿದು ವಾಹನಗಳು, ಯಂತ್ರಗಳ ಬಿಡಿಭಾಗಗಳ ರಚನೆಯವರೆಗೂ ತಾಂತ್ರಿಕ ಕೌಶಲ್ಯವನ್ನು ವಿಶ್ವಕರ್ಮರು ಪ್ರತಿನಿಧಿಸುತ್ತಾರೆ. ಇಂದಿಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸಕಲ ದೇಗುಲಗಳ ನಿರ್ಮಾಣದಲ್ಲೂ ವಿಶ್ವಕರ್ಮರ ಪರಿಶ್ರಮ ತುಂಬಾ ಇದೆ.ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೊಂದಾಯಿತ ಕಟ್ಟಡ
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ
ವೈದ್ಯಕೀಯ ನೆರವು ಮತ್ತು ಹೆರಿಗೆ ಭತ್ಯೆ
ಅಪಘಾತ ಪರಿಹಾರ ಮತ್ತು ಇಲಾಖೆಯಿಂದ ಸಿಗುವ ಕೌಶಲ್ಯಾಭಿವೃದ್ಧಿ ತರಬೇತಿಗಳು ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಬಿ.ಎಂ.ಎಸ್ ಜಿಲ್ಲಾದ್ಯಕ್ಷರಾದ ಶಿವಕುಮಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ನಾಗಭೂಷಣ್,ತಾಲ್ಲೂಕು ಅದ್ಯಕ್ಷರಾದ ಶಂಕರೆಡ್ಡಿ,ಕಾರ್ಯದರ್ಶಿ ಕೆ.ಅರ್ ಲಕ್ಷ್ಮೀ,ಅನಿತ,ವರ್ಷ,ವೆಂಕಟರಮಣ ನಾಯಕ್,ಎಸ್.ಎಂ ವೆಂಕಟೇಶ್,ವೆಂಕಟರತ್ನಮ್ಮ,ತಾಡಿಗೋಳ್ ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಸವಿತಾ,ಮಂಜುಳ,ಅಂಜನೇಯರೆಡ್ಡಿ,ಶ್ರೀರಾಮರೆಡ್ಡಿ,ಸರಸಮ್ಮ,ಅಮರಾವತಿ ಅಶಾಕಾರ್ಯಕರ್ತೆ,ರಾಮಕೃಷ್ಣಪ್ಪ ಮಂಜುನಾಥ್,ರಾಮರೆಡ್ಡಿ ಹಾಗೂ ತಾಲ್ಲೂಕಿನ ಕಟ್ಟಡ ಕಾರ್ಮಿಕ ಬಂಧುಗಳು ಹಾಜರಿದ್ದರು.
ವರದಿ:-ವೆಂಕಟ್ ವಿನ್ ಪಬ್ಲೀಕ್ ಟಿ.ವಿ ಕೋಲಾರ



