ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀನಿವಾಸಪುರ ತಾಲ್ಲೂಕು ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತಾಲ್ಲುಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಪ್ರತಿಭಟನೆ ಮಾಡಲಾಯಿತು.ಈ ಸಮಯದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಸರ್ಕಾರ ನಮ್ಮ ಶ್ರೀನಿವಾಸಪುರ ತಾಲ್ಲೂಕು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದ್ದು, ಸರ್ಕಾರದಿಂದ ರೈತರಿಗೆ ಪ್ರತಿ 1-00 ಎಕರೆಗೆ 50,000/-ರೂಪಾಯಿಗಳನ್ನು ಘೋಷಣೆ ಮಾಡಬೇಕು.
ಕೆ.ಸಿ.ವ್ಯಾಲಿ ನೀರನ್ನು ಶ್ರೀನಿವಾಸಪುರ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ತಕ್ಷಣ ಹರಿಸಬೇಕೆಂದು ಒತ್ತಾಯಿಸುತ್ತೇವೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕೆಂದು ತಮ್ಮ ಘನ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀನಿವಾಸಪುರ ಘಟಕದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ
ಹಾಲು ಪ್ರತಿ ಲೀಟರ್‌ಗೆ 15/- ರೂ ಹೆಚ್ಚಳ ಮಾಡಬೇಕು ಇಲ್ಲವಾದರೆ ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ಜಿಲ್ಲಾದ್ಯಕ್ಷ ಯಲವಕುಂಟೆ ಬೈರಾರೆಡ್ದಿ,ಚಂದ್ರಪ್ಪ,ನಾರಯಣಸ್ವಾಮಿ,ಶ್ರೀನಾಥ್,ವೀರಭದ್ರಪಾಅತೀಲ್,ಮುನಿರಾಜಪ್ಪ ಹಾಗೂ ಸಂಘದ ಸದಸ್ಯರು ಹಾಜರಿದ್ದರು
ವರದಿ:-ವೆಂಕಟ್ ಜಿಲ್ಲಾ ವರದಿಗಾರರು ವಿನ್ ಪಬ್ಲಿಕ್ ನ್ಯೂಸ್ ಕೋಲಾರ



